ಮಂಗಳವಾರ, ಏಪ್ರಿಲ್ 16, 2013

ನನ್ನಮ್ಮ ........!

ನನ್ನೊಡಲ ನೂರು ಕನಸಿಗೆ 
ಜೀವವಾದವಳೇ .... 
ಕಂಗಳಿನ ಭಾಷೆ ಮಾತಾಡುವಂತೆ 
ಮಾಡಿದವಳೇ ..... 


ಜೊತೆಗಿದ್ದು ಗುರುವಂತೆ ತಿದ್ದಿ 
ನಡೆಸಿದವಳೇ.... 
ಹರಸುತ್ತ ಕ್ಷಮಿಸುತ್ತ ಬಾಲ್ಯ 
ಹಂಚಿಕೊಂದವಳೇ ..... 


ಏನೆಂದು ಕರೆಯಲಿ ನಿನ್ನ 
ಗುರುವೋ, ಸ್ನೇಹಿತೆಯೂ 
ನನ್ನೊಡತಿಯೋ .... 


ಬೊಗಸೆಯತುಂಬಾ ಒಲವ 
ತುತ್ತು ತಿನ್ನಿಸಿದವಳೇ....  
ನನ್ನತ್ತ ಮುಗ್ದ ನಗು ಚೆಲ್ಲಿ 
ಮಡಿಲ ಜೋಗುಳದಲ್ಲಿ ನನ್ನ ಮೆರೆಸಿದವಳೇ .... 


ಏನೆಂದು ಕರೆಯಲೇ ನಿನ್ನ 
ನನ್ನಮ್ಮ ಪದಗಳಿಗೆ ಸಿಗದ 
ಅಮೃತ ಶಿಲೆ ನೀನು.... 
ಬಡಿಸಿದಷ್ಟು ತೀರದ 
ಅಕ್ಷಯನಿಧಿ ನೀನು.....  

                                                 ರಮ್ಯ. ಜೆ