ಭಾನುವಾರ, ಜೂನ್ 16, 2013

ನೋಡೀಗ...... !


ನೋಡೀಗ  ನಿಂತಿರುವೆ  
ಹಾದಿಮರೆತ  ಕರುವಿನಂತೆ 
ಊರಸೇರಲು ಕಾತರಿಸಿ 
ಕಂಗೆಟ್ಟಿ ನಿನ್ನ ನೋಡುವಂತೆ 


ಶೃತಿಇರದ ಸ್ವರದಂತೆ 
ನಾನೀಗ ಹೊರಡ ಬಹುದೇ 
ನನ್ನೊಳಗೆ ಮಧುರ ರಾಗ 
ನಿನ್ನ ಉಸಿರಿಂದ ............... 


ಕಾದು ಕಾತರಿಸಿ ಕುಂದುತಿಹೇನು ನಾ 
ಬಾ ಇಂದೇ ನೀನು ಜೆವದೊಡಲಾಗಿ 
ಬಾ ಇಂದೇ ನನ್ನ ಮನದ ಹಸಿರಾಗಿ 


ಬರುವುದಾದರೆ ಇಂದೇ ಬಾ 
ಬಾಳುವೆ ಮತ್ತೆ ಹಸಿಯ ನೆನಪುಗಳಿಗೆ 
ಉಸಿರ ನೀಡುತ್ತ ಕನವರಿಸುವ 
ಕಂಗಳಿಗೆ ತಂಪು ನೀಡುತ್ತ 


ಇಲ್ಲವಾದರೆ ಸಂತಸಪಡು 
ನನ್ನ ಈ ನೋವಿಗೆ ಕಾರಣ ನೀನೆಂದು 
ಮೂಕಮನಸಿನ ನೂರು ಕನಸಿಗೆ 
ಕೊಳ್ಳಿ ಇಟ್ಟ ಗೆಲುವು ನಿನ್ನದೆಂದು ....... 
     


                                            ರಮ್ಯ.ಜೆ