ಭಾನುವಾರ, ಜುಲೈ 7, 2013

ಹುಡುಕು ಪ್ರೀತಿಯ

ಧರ್ಮ ಯಾವುದಾದರೇನು 
ತಿಳಿವು ಒಂದೇ ಅಲ್ಲವೇ 
ಯಾವ ಭಾಷೆ ಯಾದರೇನು 
ಹೃದಯದಾ ಭಾವಕೆ 

ಕಣ್ಣ ಭಾಷೆ ಕರುಳ ಭಾಷೆ 
ಮನದ ಭಾಷೆ ಗೆಟುಕದಾ 
ಪ್ರೀತಿ ಸ್ನೇಹ ದೊಡಲಿಗೆ
ಅರ್ಥಉಂಟೆ ಜಗದಲಿ 


ಇಲ್ಲ ಇರುವ ಏನು ಇರದ 
ಬಾಳ ದಾರಿಯಲ್ಲಿಯೇ 
ಹುಡುಕ ಬೇಕು ಪ್ರೀತಿ ಇಂದ 
ಪ್ರೀತಿಯನ್ನು ನೀಡುತ 


                              ರಮ್ಯ. ಜೆ  

ಓ ಚೈತನ್ಯ ಧಾರೆಯೇ ......!

ಅಂದು ನೀ ಹಂಚಿದ ಪ್ರೀತಿಯ ಅಮೃತ 
ಇಂದು ತಾಕಿದೆ ನನ್ನ ಹೃದಯಕೆ 
ಬಂದು ಎತ್ತಲಿಂದಲೋ 
ಎಲ್ಲ ಕುಶಲಗಳ ಒತ್ತೆ ಇಡು 

ನಿಲ್ಲದಿರು ಗುರಿ ಮುಟ್ಟುವತನಕ
ಅರಿಮೊದಲು ನಿನ್ನ ನೀ 
ಇಣಿಸದಿರು ಪರರ ಕೆಡುಕಾ 
ತೊಡೆದು ಹಾಕು ಅಜ್ಞಾನವ 

ಮುತ್ತಿಸು ಜ್ಞಾನದ ಜೋತಿಯ 
ಎಲ್ಲ ನೀನೆ, ಎಲ್ಲ ನೀನೆ 
ನಿನ್ನ ಬದುಕಾ ರೂಪಿಸೋ 
ಶಕ್ತಿ ನೀನೆ ಎಂದೇ ನೀ..... 

ಅರಿವಾಗುತ್ತಿದೆ ಇಂದು ನಿನ್ನ ನಿಲುವು
ಅರಳಿಸುತ್ತಿದೆ ಮಾನವ ಬುಗ್ಗೆ ಯಂತೆ 
ಎದೆಯ ಮಿಡಿತವೆ ತಟ್ಟುತಿದೆ 
ಚಡಪದಿಸದಂತೆ ಮನ ತಾಳಲಾರದೆ

ಬತ್ತಿ ಹೋದ ಬೆಂಗಾಡಿನಲ್ಲಿ 
ಮೂಡಿಬಂಡ ಹಸಿರು ನಿನ್ನೀ ಆದರ್ಶ 
ದಿಕ್ಕೆಟ್ಟು ಓಡುತಿಹ ಬದುಕಿನಾ ಅಶ್ವಕ್ಕೆ 
ದಿಕ್ಸೂಚಿ ನಿನ್ನೀ ವಿಶಾಲ ನೋಟ 



ಅರಳುಬಾ ನನ್ನೀ  ಮನದ ಕೆಸರಿನಲ್ಲಿ 
ತುಂಬುವಾ ಹೃದಯಕ್ಕೆ ಆಶಯದ ಹೊಂಗಿರಣ 
ನಂಬು ನನ್ನ ನಿನ್ನೀ ದೀರ ಕಂದನು ನಾನು 
ತುಂಬು ಬಾ ಚೈತನ್ಯ ನನ್ನೀ ಮನದಲ್ಲಿ....... 

                                                    ರಮ್ಯ. ಜೆ 




ಪ್ರೀತಿ ಸೋಲದು.....!

ಮನಸಾರೆ ಮನೆಮಾಡಿ  ಮರೆಯಾದವರೆಷ್ಟೋ 
ಭಾವನೆಗಳ ಬಯಲಲ್ಲಿ ಮನಸನ್ನೆ ಆಟಿಕೆಮಾಡಿ 
ಹೃದಯ ತುಲಿದವರೆಷ್ಟೋ ....... 
ಎಷ್ಟೋ ಅವೆಷ್ಟೋ ಮಾಸಿಹೋದ ಕನಸುಗಳು 
ಜಾರಿಬಿದ್ದ ಜೀವಗಳು ಪ್ರೀತಿಯಲ್ಲಿ,

ಸತ್ತರೂ ಉಸಿರಾಡುವರು ಪ್ರೀಮಿಗಳು ಮಾತ್ರ 
ಕಾರಣ, ಪ್ರೀತಿ ಸೋಲದು ಪ್ರೀತಿ ಸಾಯದು 
ಸೋಲುವುದು ಸಾಯುವುದು ಪ್ರೀತಿಯಲ್ಲ
ಪ್ರೀತಿಯ ವೇಷ ಧರಿಸಿ ನಿಂತವರಷ್ಟೋ...... 
                                                             ರಮ್ಯ . ಜೆ