ಭಾನುವಾರ, ಜುಲೈ 7, 2013

ಓ ಚೈತನ್ಯ ಧಾರೆಯೇ ......!

ಅಂದು ನೀ ಹಂಚಿದ ಪ್ರೀತಿಯ ಅಮೃತ 
ಇಂದು ತಾಕಿದೆ ನನ್ನ ಹೃದಯಕೆ 
ಬಂದು ಎತ್ತಲಿಂದಲೋ 
ಎಲ್ಲ ಕುಶಲಗಳ ಒತ್ತೆ ಇಡು 

ನಿಲ್ಲದಿರು ಗುರಿ ಮುಟ್ಟುವತನಕ
ಅರಿಮೊದಲು ನಿನ್ನ ನೀ 
ಇಣಿಸದಿರು ಪರರ ಕೆಡುಕಾ 
ತೊಡೆದು ಹಾಕು ಅಜ್ಞಾನವ 

ಮುತ್ತಿಸು ಜ್ಞಾನದ ಜೋತಿಯ 
ಎಲ್ಲ ನೀನೆ, ಎಲ್ಲ ನೀನೆ 
ನಿನ್ನ ಬದುಕಾ ರೂಪಿಸೋ 
ಶಕ್ತಿ ನೀನೆ ಎಂದೇ ನೀ..... 

ಅರಿವಾಗುತ್ತಿದೆ ಇಂದು ನಿನ್ನ ನಿಲುವು
ಅರಳಿಸುತ್ತಿದೆ ಮಾನವ ಬುಗ್ಗೆ ಯಂತೆ 
ಎದೆಯ ಮಿಡಿತವೆ ತಟ್ಟುತಿದೆ 
ಚಡಪದಿಸದಂತೆ ಮನ ತಾಳಲಾರದೆ

ಬತ್ತಿ ಹೋದ ಬೆಂಗಾಡಿನಲ್ಲಿ 
ಮೂಡಿಬಂಡ ಹಸಿರು ನಿನ್ನೀ ಆದರ್ಶ 
ದಿಕ್ಕೆಟ್ಟು ಓಡುತಿಹ ಬದುಕಿನಾ ಅಶ್ವಕ್ಕೆ 
ದಿಕ್ಸೂಚಿ ನಿನ್ನೀ ವಿಶಾಲ ನೋಟ ಅರಳುಬಾ ನನ್ನೀ  ಮನದ ಕೆಸರಿನಲ್ಲಿ 
ತುಂಬುವಾ ಹೃದಯಕ್ಕೆ ಆಶಯದ ಹೊಂಗಿರಣ 
ನಂಬು ನನ್ನ ನಿನ್ನೀ ದೀರ ಕಂದನು ನಾನು 
ತುಂಬು ಬಾ ಚೈತನ್ಯ ನನ್ನೀ ಮನದಲ್ಲಿ....... 

                                                    ರಮ್ಯ. ಜೆ