ಸೋಮವಾರ, ಸೆಪ್ಟೆಂಬರ್ 30, 2013

ಅಜ್ಜಿ ಮನೆ ಈಗ ನೆನಪಷ್ಟೇ......


ತೀರ್ಥಹಳ್ಳಿಯ ಬಳಿ ಹಳ್ಳಿಯ ಮನೆ ನಮ್ಮಜ್ಜಿ ಮನೆ ನನ್ನ ಪಾಲಿಗೆ ಅದು ಬರಿ ಮನೆ ಅಲ್ಲ ನನ್ನ ಬಾಲ್ಯದ ಸಾವಿರ ನೆನಪುಗಳ ಕಣ್ಮಂದೆ ತರಿಸುವ ಸ್ವರ್ಗ.  ಅಕ್ಕ ನೋಂದಿಗೆ ಆಡುತ್ತಿದದ್ದು, ಪಪ್ಪ ತಂದುಕೊಟ್ಟಿದ್ದ ಪ್ಲಾಸ್ಟಿಕ್ ಜೋಕಾಲಿ ಮರಕ್ಕೆ ಕಟ್ಟಿ ದಿನ ಪೂರ ತೂಗುತ್ತಿದ್ದದ್ದು, ತಂಗಿ ತಮ್ಮ ನೋಂದಿಗೆ ಊರುಸುತ್ತಿದ್ದು, ಊರಾಚೆ ಮನೆಯಲ್ಲಿ ಮಾವು ಕದ್ದು ತಿಂದದ್ದು ಎಲ್ಲ ಆಗಾಗ ನನ್ನ ಕಾಡುವ ಮನಕೆ ತಂಪು ತರಿಸುವ ನೆನಪುಗಳು.....

       ಕೆಲವು ದಿನ ಕಳೆದ ನಂತರ ಅಜ್ಜಿ ಮನೆಗೆ ಹೋದಾಗ ಹಳೆಯ ಮನೆಯನ್ನು ನವೀಕರಿಸಿದ್ದರು,  ಎಲ್ಲ ಹೊಸತು ನೋಡಲು ಮುದ ಯೆನಿಸಿದ್ದರೂ, ಮನಸು ಹಳೆಯ ಮನೆಯ ನೆನಪುಗಳಿಂದಾಚೆ ಸಾಗಲು ಬಯಸಿರಲಿಲ್ಲ, ನಾವು ನೆಗೆದಾಡುತ್ತಿದ್ದ ಮಾವ ಮಲಗುತ್ತಿದ್ದ ಸಿಮೆಂಟ್ ನ ಕಟ್ಟೆ ಯ ಜಾಗದಲ್ಲಿ ಕಾಟ್ ಬಂದಿತ್ತು, ದೀಪಾವಳಿಯಲ್ಲಿ ಪಟಾಕಿ ಸದ್ದಿಗೆ ನಾವು ಹೆದರಿ ಅಡಗುತ್ತಿದ್ದ ಅಡುಗೆ ಮನೆ ಈಗ ಮೊದಲಿನಷ್ಟು ವಿಶಾಲವಾಗಿಲ್ಲ ಎಲ್ಲ ಬದಲಾಗಿತ್ತು ಮನಸ್ಸು ಒಪ್ಪದಿದ್ದಷ್ಟು.

ಕೆಲವೇ ವರ್ಷ ದಲ್ಲಿ ಮಾವ ಮಾಮಿ ತೀರಿಕೋಂಡ ಬಳಿಕ ಮತ್ತೆ ಯಾರಿಗು ಆ ಮನೆಯಲ್ಲಿ ಇರುವ ಪರಿಸ್ಥಿತಿಯಾಗಲಿ ಮನಸಾಗಲಿ ಇರಲಿಲ್ಲ,  ಸಂಭಂದಿಕರೊಬ್ಬರ ಮದುವೆಗೆ ಹೋದಾಗ ಮಾಸಿದ ರಸ್ತೆ ಪಾಳುಬಿದ್ದ ಮನೆಯ ನೋಡಿ ಕಣ್ತುಂಬಿ ಬಂದಿತ್ತು ನಮ್ಮಜ್ಜಿ ಮನೆ ಪಾಳುಬಿದ್ದಿತ್ತು.........! ಮತ್ತೆ ಕೆಲವೇ ದಿನಗಳಲ್ಲಿ ಬೇರೆ ಯಾರಿಗೋ ಅದನ್ನು ಮಾರಲಾಯ್ತು

       ನನ್ನ ಭಾವನೆಗಳ ಬಯಲ ಹೂದೋಟ ಬಾಲ್ಯದ ನೆನಪುಗಳ ಸ್ವಗ ಈಗ ನೋಡಲೂ ಸಿಗದಷ್ಟು ದೂರ......
ಹೌದು ಮನುಷ್ಯ ಬೆಳೆಯುತ್ತಾನೆ ಅವಷ್ಯಕತೆ ಮನಸ್ಸು ಎಲ್ಲವೂ ಬದಲಾಗತ್ತೆ ಆದರೆ ನಮ್ಮ ಸುತ್ತ ಮೌನವಾಗಿ ತಾಯಿ ಯಂತೆ ಪೊರೆದ ಪರಿಸರ ನವು ಗೆದ್ದೆನೆಂದು  ಬೀಗುವ ನಮ್ಮ ನೋಡಿ ಮೆಲ್ಲಗೆ ನಾವು ಕಳೆದು ಕೋಂಡ ಕ್ಷಣಗಳ ಲೆಕ್ಕ ಕೊಡತ್ತದೆ.......


                                                                                                                               ರಮ್ಯ.ಜೆ........