ಗುರುವಾರ, ಅಕ್ಟೋಬರ್ 31, 2013

ಪ್ರೀತಿಗೆ ಎಲ್ಲೆ ಇಲ್ಲ ಅಂದ ಮೇಲೆ 
ಪ್ರೀತಿ ಒಂದು ಅಪೂರ್ಣತೆಯ ಭಾವವಾ....?
ನನಗೇ ಬೇಕು ಎನ್ನುವ ಮನಸಿದ್ದ ಮೇಲೆ 
ಸ್ವಾರ್ಥಕ್ಕೂ ಪ್ರೀತಿಗೂ ಬೇದವೆಲ್ಲಿದೆ.....?

ಕೊಟ್ಟು ಪಡೆಯಲು ಪ್ರೀತಿ
ವ್ಯಾಪಾರವಲ್ಲ ಅಂದ ಮೇಲೆ
ಬರೀ ಪಡೆದವನ
ಋಣದ ಬಾಪ್ತು ತೀರುವುದೆಂತು....?

ಪ್ರೀತಿ ಗುಲಾಮಗಿರಿ ಅಲ್ಲ ಎಂದ ಮೇಲೆ
ಶರಣಾಗುವುದಕ್ಕೆ ಬೇರೆ ಅರ್ಥ ವೇನು
ಪ್ರೀತಿ ಯಲ್ಲಿ ಸೋಲುವುದು ಎಂದರೆ
ಗೆಲ್ಲುವುದಕ್ಕೂ ಬೇರೆ ಅರ್ಥ ವಿದೆಯೇ....?

ಈ ಗೌಜುಗಳು ಸಂತೆ ನನಗೆ ಬೇಡ
ಪ್ರೀತಿ ಅರ್ಥವಾ ಕೆಣಕಿ
ವೇದಾಂತಿ ಯಾಗುವಾ
ಬಯಕೆಯೂ ನನಗಿಲ್ಲ....

ನಲ್ಮೆಯ ಕಣ್ಗಳೋಂದಿಗೆ
ಬದುಕ ಯಾತ್ರೆಯಾ ಮುಗಿಸ ಬಂದಿರುವೆ
ವಾತ್ಸಲ್ಯವೋ ಮಮಕಾರವೋ ಕಡೆಗೆ ಪ್ರೀತಿಯೋ
ನನಗೆ ಅದರ ಅರ್ಥ ಗೊತ್ತಿಲ್ಲ

ನನ್ನದೆಂದು ಸಾಗುತ್ತಿರುವೆ
ಈ....... ದಾರಿ ಕಡೆಗೆ
ಸಾರ್ಥಕತೆಯ ಭಾವ ಉಳಿದರೆ
ಅಷ್ಟೆ ಸಾಕು ಜನುಮದ್ದುದಕ್ಕೂ....

.........ರಮ್ಯ.ಜೆ