ಭಾನುವಾರ, ಏಪ್ರಿಲ್ 21, 2013

ಕೈಚಾಚಿ ಒಮ್ಮೆ ....!

ಮೋಡತಾ  ಕವಿದರು ಸೂರ್ಯನನು
ಬೆಳಕ ನುಂಗಲು ಸಾಧ್ಯವೇ? 
ಇರುಳ ಚಂದ್ರನು ಮಾಸಿದರು 
ಪೌರ್ಣಮೆಯ ಚೆಲುವಿಗೆ ಕೊನೆಇದೆಯೆ........?


ಬದುಕ ಪಯಣದಲ್ಲಿ ಎಲ್ಲಹೀಗೆ 
ಒಮ್ಮೆ ಸೋಲು ಒಮ್ಮೆ ಗೆಲುವು 
ನಿಂತರೆ ಬೆಲೆಇಲ್ಲ 
ತಿರುಗದೆ ಎಲ್ಲೇ ಇಲ್ಲ.........!


ನಶ್ವರದ ನಗು ಚೆಲ್ಲಿ ಎಲ್ಲನೋವಿಗೆ 
ಮರೆಯದಿರು ಬುತ್ತಿ ನಿನ್ನ ಪಾಲಿನದೆ 
ಎಲ್ಲ ಸೋಲಿಗೂ ಉತ್ತರವು ಮುಂದಿದೆ 
ಆಗಸವು ನಿಮ್ಮದೇ ಕೈಚಾಚಿ ಒಮ್ಮೆ ....!


ಇಟ್ಟ ಕಣ್ಣೀರು ಮುತ್ತಾಗಿಬರುವ 
ಕಾಲವು ಮುಂದಿದೆ 
ನಾಳೆಗಳ ನೆರಳಾಟ 
ಬೆಳಕನ್ನೇ ತರಲಿದೆ ಬಿಂಕವೇಕೆ .....?


ಮಂಗಳವಾರ, ಏಪ್ರಿಲ್ 16, 2013

ನನ್ನಮ್ಮ ........!

ನನ್ನೊಡಲ ನೂರು ಕನಸಿಗೆ 
ಜೀವವಾದವಳೇ .... 
ಕಂಗಳಿನ ಭಾಷೆ ಮಾತಾಡುವಂತೆ 
ಮಾಡಿದವಳೇ ..... 


ಜೊತೆಗಿದ್ದು ಗುರುವಂತೆ ತಿದ್ದಿ 
ನಡೆಸಿದವಳೇ.... 
ಹರಸುತ್ತ ಕ್ಷಮಿಸುತ್ತ ಬಾಲ್ಯ 
ಹಂಚಿಕೊಂದವಳೇ ..... 


ಏನೆಂದು ಕರೆಯಲಿ ನಿನ್ನ 
ಗುರುವೋ, ಸ್ನೇಹಿತೆಯೂ 
ನನ್ನೊಡತಿಯೋ .... 


ಬೊಗಸೆಯತುಂಬಾ ಒಲವ 
ತುತ್ತು ತಿನ್ನಿಸಿದವಳೇ....  
ನನ್ನತ್ತ ಮುಗ್ದ ನಗು ಚೆಲ್ಲಿ 
ಮಡಿಲ ಜೋಗುಳದಲ್ಲಿ ನನ್ನ ಮೆರೆಸಿದವಳೇ .... 


ಏನೆಂದು ಕರೆಯಲೇ ನಿನ್ನ 
ನನ್ನಮ್ಮ ಪದಗಳಿಗೆ ಸಿಗದ 
ಅಮೃತ ಶಿಲೆ ನೀನು.... 
ಬಡಿಸಿದಷ್ಟು ತೀರದ 
ಅಕ್ಷಯನಿಧಿ ನೀನು.....  

                                                 ರಮ್ಯ. ಜೆ ಸೋಮವಾರ, ಏಪ್ರಿಲ್ 15, 2013

ಹಳಿಯ ಹಕ್ಕಿಗಳಾಗುವ

ಮುಕವಗಿದೆ ಭಾವ
ಮನದ ಹಮ್ಮು ಬಿಮ್ಮುಗಳ ನೆನೆದು
ಎಲ್ಲ ತುಮುಲಗಳ ಮೂಟೆ ಕಟ್ಟಿ
ಯೇಸೆಯುವಾಸೆ ಆ ಕಾರ್ಮೋಡದಾಚೆ


ಕಳೆದು ಹೋಗಿದೆ ನೋಡು ನನ್ನದೆಲ್ಲ
ಉಳಿದ ನಲ್ಮೆಯ ಭಾವ ನಿನ್ನದೇ ಎಲ್ಲ
ಹೊರಬಂದೆ  ನಾನು ಕವಿದ ಕತ್ತಲಿಂದ
ಹಾರಿಬಿಡುವ ನಾವು ನೆಲಗಗನದ ತುಂಬಾ


ಅಲ್ಲಿ ನಾನಿಲ್ಲ, ನೀನಿಲ್ಲ........!
ಹೋಲಿಸಿಕೊಂಡು ನೀಳನಾಲಗೆಯ
ತುಂಬಿಸುವ ಬಾರಾ ವದನದಲಿ ನಗುವ
ಹಳಿಯ ಹಕ್ಕಿಗಳಾಗುವ ಮತ್ತೆ ಕೂಡಿ ಹಾರುವ.


                                                        ರಮ್ಯ.ಜೆ

ಭಾನುವಾರ, ಏಪ್ರಿಲ್ 14, 2013

ಮರೆಯಾಗಿ ಹೋಗಿಬೇಗ......... !

ನೆನಪುಗಳ ಕಾರ್ಮೋಡ ಸುತ್ತ ಕವಿದು
ಬೆಳಕನ್ನೆ ನುಂಗಿತು ಬಗ ಬಗನೆ ಎದ್ದು 
ಹೊರಬರುವ ಆಸೆ ಮೂಡಿತ್ತು ಒಳಗೊಳಗೆ 
ಆದರು ತಮವು ಕುಕ್ಕಿತ್ತು ಕಣ್ಣ 


ನೆನಪುಗಳೇ ಹಾಡಾಗಿ ಹಾಡಬೇಡಿ 
ಆ ಹಾಡು  ನನಗೆ ಕರ್ಕಶವೆ  ಅಲ್ಲ 
ಆದರು ಕಣ್ಣ ಹನಿತುಂಬ  ಭಾರ 
ಹನಿಮೀರಿದ  ಹಾಡಹಾಡುಬೇಗ 

ನೆನೆಪುಗಳೇ  ಮರೆಯಾಗಿ ಹೋಗಿಬೇಗ 
ಕನಸಾಗಿ ಕಾಡುವುದಿದ್ಯವ ನ್ಯಾಯ 
ಮರೆಯಲೆಂದೇ  ಹೋಗು ಮರೆವೆ ನೀನಾಗು 
ಕಾರ್ಮೋಡದಂತೆ ಕವಿಯದಿರು ಕಣ್ಗೆ .....                                                ರಮ್ಯ. ಜೆ ಬುಧವಾರ, ಏಪ್ರಿಲ್ 10, 2013

ಏಕೆ ಮೌನವಾದೆ ಹಾಡು ಮುಗಿವ ಮೊದಲೇ

 ಕಣ್ಣಲಿ ಕಟಿದ್ದ ಕನಸು ಇನ್ನು ಮಾಸಿಲ್ಲ 
 ಎದೆಯ ಬಡಿತದ  ಲಹರಿ ಇನ್ನು ಕದಲಿಲ್ಲ 
 ಮನವು ಇನ್ನು ನಿನ್ನ ಕಾಯುವುದ ನಿಲ್ಲಿಸಿಲ್ಲ 
 ಏಕೆ ಮರೆಯದೆ ಇನಿಯ ನನಗೆ ತಿಳಿಸದೇ