ಬುಧವಾರ, ಡಿಸೆಂಬರ್ 10, 2014

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........: "ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ" "ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ" "ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ ಕಲ್ಲೋಂದು ತೂರಿಬಂದು ತಾಕಿದಾಗ.... ಅದೇ ಅನುಭವ ಪ್ರೀತಿ ಸೋತಾಗ ಆಗುವುದು.... 

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........: "ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ" "ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ" "ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ &quo...

ಶುಕ್ರವಾರ, ಜನವರಿ 10, 2014

ನನ್ನಮ್ಮ ನನಗೆ ದೇವರು..........

ನನಗಿನ್ನು ಸ್ಪಷ್ಟವಾಗಿ ನೆನಪಿದೆ ಆಗ ನಾನು ಆರನೇ ತರಗತಿ ಓದುತ್ತಿದ್ದೆ, ಆದಿನಗಳಲ್ಲಿ ಹಬ್ಬಕ್ಕೆ ಬಿಟ್ಟರೆ ಬಟ್ಟೆ ಸೇರಿದಂತೆ ಮೊದಲಾದ ವಸ್ತುಗಳನ್ನು ತರುತ್ತಿದ್ದದ್ದು ಸಂಭಂದಿಕರ ಮದುವೆಗೇ ಸರಿ.
                                                            ಅದು ಮಾವನ ಮದುವೆ ಚಿಕ್ಕಿಯೋಟ್ಟಿಗೆ ಶಾಪಿಂಗ್ ಗೆ ಸಿದ್ದವಾದೆವು ಅಮ್ಮ
ನಾನು ಅಕ್ಕ ಅದೆಷ್ಟು ಸಂಭ್ರಮ ಆದಿನಗಳು ಮತ್ತೆ ಬರಲಾರವು ಬಾಲ್ಯದ ನೆನಪುಗಳೇ ಹಾಗೆ. ದಿನವಿದೀ ಸುತ್ತಿ ಹೊಸ ಅಂಗಿ ಚಪ್ಪಲ್ಲಿ ಎಲ್ಲವೂ ಕೋಂಡೆವು ಅಮ್ಮನಿಗೆ ಪಪ್ಪ ಆಗಿನ್ನು ತಂದಿದ್ದ ಹೋಸಸೀರೆ ಇದ್ದರಿಂದ ಮತ್ತೆ ಸೀರೆ ಕೊಳ್ಳಲ್ಲಿಲ್ಲ ಅಮ್ಮನಿಗೆ ಚಪ್ಪಲಿ ಕೋಳ್ಳಲು ಮೂರ್ನಾಲ್ಕು ಅಂಗಡಿ ಸುತ್ತಿದ್ದೆವು ಅಮ್ಮನ ಪಾದ ಮಕ್ಕಳಂತೆ ಸಣ್ಣದ್ದು, ಆದ್ದರಿಂದ ಬೇಗ ಒಳ್ಳೆಯ ಚಪ್ಪಲಿ ಸಿಗಲ್ಲಿಲ್ಲ ಅಷ್ಟಕ್ಕೆ ಅಮ್ಮ ಸಾಕು ಹಳೆಯದೇ ಇದೆಯಲ್ಲ ಇನ್ನು ಮನೆಗೆ ಹೋಗುವ ಎಂದವರೇ ಯಾರ ಮಾತು ಕೇಳದಂತೆ ಆಟೋ ಕೂಗಿಯೇ ಬಿಟ್ಟರು. ಮಕ್ಕಳಿಗೆಂದರೆ ಸಾಲು ಸಾಲು ಅಂಗಡಿ ಸುತ್ತುವ ಅಮ್ಮ ಮಕ್ಕಳಿಗಾಗಿ ಏನೆಲ್ಲಮಾಡುವ ಅಮ್ಮ ತಮಗೆಂದರೆ ಯಾಕೆ ತಾಳ್ಮೆ ವಹಿಸಲ್ಲಿಲ್ಲ ಎಂದು ನನಗೆ ಅರ್ಥವಾಗಲೇ ಇಲ್ಲ ಆಟೋದಲ್ಲಿ ಕುಳಿತನಾನು ಮೆಲ್ಲಗೆ ಅಮ್ಮನತ್ತ ನೋಡಿದೆ ಬೆಳಗ್ಗಿನಿಂದ ಸುತ್ತಿದ್ದ ಆಯಾಸ್ಸಕ್ಕೋ ಏನೋ ಗೊತ್ತಿಲ್ಲ ಮುಖ ಪೂರ್ತಿ ಸೋತಿತ್ತು ನನಗಾಗ ಸಣ್ಣವಯ್ಯಸ್ಸಾದ್ದರಿಂದ ನನಗೆ ಬೇರೆ ಯಾವುದೂ ಕಾರಣ ಕಾಣಲ್ಲಿಲ್ಲ ಚಪ್ಪಲಿ ಸಿಗದಿದ್ದಕ್ಕೇ ಅಮ್ಮ ಬೇಜಾರಾಗಿದ್ದಾರೆಂದು ನಾನು ಅತ್ತಿದ್ದೆ ..... 

                                                             ಜಗತ್ತಿನ ಶಕ್ತಯನ್ನು ಒಂದೆಡೆ ಕೂಡುಹಾಕಿದರೂ ಅಮ್ಮನ ಪ್ರೀತಿಗೆ ಸಮ ತೂಗಲಾರದು ಅಮ್ಮ ಶಬ್ದವೇ ಉನ್ಮಾದ ತರುವಂತದ್ದು ಎಲ್ಲಾ ಮಕ್ಕಳ ಬದುಕಲ್ಲೂ ಹೀಗೋಂದು ಅನುಭವ ಆಗಿರಬಹುದೆಂಬ ಖಾತ್ರಿಯಲ್ಲಿ ಹೇಳುತ್ತಿದ್ದೇನೆ ಯಾವುದೊ ಕಥೆಯಲ್ಲಿ ಜೀವಂತ ವ್ಯಕ್ತಿಗಳಲ್ಲಿ ತ್ಯಾಗ ಮಮತೆಯ ಬಗ್ಗೆ ಓದಿ ಭಾವುಕರಾಗುತ್ತೇವೆ ಆದರೆ ಎಲ್ಲರ ಮನೆಯಲ್ಲೂ ದೀಪದಂತೆ ಬೆಳಗುತ್ತಿರುವ ಅಮ್ಮ ಆಕೆಯ ತ್ಯಾಗದ ಬಿಕ್ಷೆಯೇ ನಮ್ಮ ಬದುಕು ಆಕೆಯ ಒಲವಿನ ಋಣಕ್ಕೆ ನಾವೆಲ್ಲ ಅದೆಷ್ಟು ಆಭಾರಿಯೋ.


                                                             ...........  ರಮ್ಯ.ಜೆ