ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........: "ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ" "ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ" "ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ ಕಲ್ಲೋಂದು ತೂರಿಬಂದು ತಾಕಿದಾಗ.... ಅದೇ ಅನುಭವ ಪ್ರೀತಿ ಸೋತಾಗ ಆಗುವುದು....
ಬುಧವಾರ, ಡಿಸೆಂಬರ್ 10, 2014
ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........
ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........: "ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ" "ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ" "ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ &quo...
ಶುಕ್ರವಾರ, ಜನವರಿ 10, 2014
ನನ್ನಮ್ಮ ನನಗೆ ದೇವರು..........
ನನಗಿನ್ನು ಸ್ಪಷ್ಟವಾಗಿ ನೆನಪಿದೆ ಆಗ ನಾನು ಆರನೇ ತರಗತಿ ಓದುತ್ತಿದ್ದೆ, ಆದಿನಗಳಲ್ಲಿ ಹಬ್ಬಕ್ಕೆ ಬಿಟ್ಟರೆ ಬಟ್ಟೆ ಸೇರಿದಂತೆ ಮೊದಲಾದ ವಸ್ತುಗಳನ್ನು ತರುತ್ತಿದ್ದದ್ದು ಸಂಭಂದಿಕರ ಮದುವೆಗೇ ಸರಿ.
ಅದು ಮಾವನ ಮದುವೆ ಚಿಕ್ಕಿಯೋಟ್ಟಿಗೆ ಶಾಪಿಂಗ್ ಗೆ ಸಿದ್ದವಾದೆವು ಅಮ್ಮ
ನಾನು ಅಕ್ಕ ಅದೆಷ್ಟು ಸಂಭ್ರಮ ಆದಿನಗಳು ಮತ್ತೆ ಬರಲಾರವು ಬಾಲ್ಯದ ನೆನಪುಗಳೇ ಹಾಗೆ. ದಿನವಿದೀ ಸುತ್ತಿ ಹೊಸ ಅಂಗಿ ಚಪ್ಪಲ್ಲಿ ಎಲ್ಲವೂ ಕೋಂಡೆವು ಅಮ್ಮನಿಗೆ ಪಪ್ಪ ಆಗಿನ್ನು ತಂದಿದ್ದ ಹೋಸಸೀರೆ ಇದ್ದರಿಂದ ಮತ್ತೆ ಸೀರೆ ಕೊಳ್ಳಲ್ಲಿಲ್ಲ ಅಮ್ಮನಿಗೆ ಚಪ್ಪಲಿ ಕೋಳ್ಳಲು ಮೂರ್ನಾಲ್ಕು ಅಂಗಡಿ ಸುತ್ತಿದ್ದೆವು ಅಮ್ಮನ ಪಾದ ಮಕ್ಕಳಂತೆ ಸಣ್ಣದ್ದು, ಆದ್ದರಿಂದ ಬೇಗ ಒಳ್ಳೆಯ ಚಪ್ಪಲಿ ಸಿಗಲ್ಲಿಲ್ಲ ಅಷ್ಟಕ್ಕೆ ಅಮ್ಮ ಸಾಕು ಹಳೆಯದೇ ಇದೆಯಲ್ಲ ಇನ್ನು ಮನೆಗೆ ಹೋಗುವ ಎಂದವರೇ ಯಾರ ಮಾತು ಕೇಳದಂತೆ ಆಟೋ ಕೂಗಿಯೇ ಬಿಟ್ಟರು. ಮಕ್ಕಳಿಗೆಂದರೆ ಸಾಲು ಸಾಲು ಅಂಗಡಿ ಸುತ್ತುವ ಅಮ್ಮ ಮಕ್ಕಳಿಗಾಗಿ ಏನೆಲ್ಲಮಾಡುವ ಅಮ್ಮ ತಮಗೆಂದರೆ ಯಾಕೆ ತಾಳ್ಮೆ ವಹಿಸಲ್ಲಿಲ್ಲ ಎಂದು ನನಗೆ ಅರ್ಥವಾಗಲೇ ಇಲ್ಲ ಆಟೋದಲ್ಲಿ ಕುಳಿತನಾನು ಮೆಲ್ಲಗೆ ಅಮ್ಮನತ್ತ ನೋಡಿದೆ ಬೆಳಗ್ಗಿನಿಂದ ಸುತ್ತಿದ್ದ ಆಯಾಸ್ಸಕ್ಕೋ ಏನೋ ಗೊತ್ತಿಲ್ಲ ಮುಖ ಪೂರ್ತಿ ಸೋತಿತ್ತು ನನಗಾಗ ಸಣ್ಣವಯ್ಯಸ್ಸಾದ್ದರಿಂದ ನನಗೆ ಬೇರೆ ಯಾವುದೂ ಕಾರಣ ಕಾಣಲ್ಲಿಲ್ಲ ಚಪ್ಪಲಿ ಸಿಗದಿದ್ದಕ್ಕೇ ಅಮ್ಮ ಬೇಜಾರಾಗಿದ್ದಾರೆಂದು ನಾನು ಅತ್ತಿದ್ದೆ .....
ಜಗತ್ತಿನ ಶಕ್ತಯನ್ನು ಒಂದೆಡೆ ಕೂಡುಹಾಕಿದರೂ ಅಮ್ಮನ ಪ್ರೀತಿಗೆ ಸಮ ತೂಗಲಾರದು ಅಮ್ಮ ಶಬ್ದವೇ ಉನ್ಮಾದ ತರುವಂತದ್ದು ಎಲ್ಲಾ ಮಕ್ಕಳ ಬದುಕಲ್ಲೂ ಹೀಗೋಂದು ಅನುಭವ ಆಗಿರಬಹುದೆಂಬ ಖಾತ್ರಿಯಲ್ಲಿ ಹೇಳುತ್ತಿದ್ದೇನೆ ಯಾವುದೊ ಕಥೆಯಲ್ಲಿ ಜೀವಂತ ವ್ಯಕ್ತಿಗಳಲ್ಲಿ ತ್ಯಾಗ ಮಮತೆಯ ಬಗ್ಗೆ ಓದಿ ಭಾವುಕರಾಗುತ್ತೇವೆ ಆದರೆ ಎಲ್ಲರ ಮನೆಯಲ್ಲೂ ದೀಪದಂತೆ ಬೆಳಗುತ್ತಿರುವ ಅಮ್ಮ ಆಕೆಯ ತ್ಯಾಗದ ಬಿಕ್ಷೆಯೇ ನಮ್ಮ ಬದುಕು ಆಕೆಯ ಒಲವಿನ ಋಣಕ್ಕೆ ನಾವೆಲ್ಲ ಅದೆಷ್ಟು ಆಭಾರಿಯೋ.
ಗುರುವಾರ, ಅಕ್ಟೋಬರ್ 31, 2013
ಪ್ರೀತಿಗೆ ಎಲ್ಲೆ ಇಲ್ಲ ಅಂದ ಮೇಲೆ
ಪ್ರೀತಿ ಒಂದು ಅಪೂರ್ಣತೆಯ ಭಾವವಾ....?
ನನಗೇ ಬೇಕು ಎನ್ನುವ ಮನಸಿದ್ದ ಮೇಲೆ
ಸ್ವಾರ್ಥಕ್ಕೂ ಪ್ರೀತಿಗೂ ಬೇದವೆಲ್ಲಿದೆ.....?
ಕೊಟ್ಟು ಪಡೆಯಲು ಪ್ರೀತಿ
ವ್ಯಾಪಾರವಲ್ಲ ಅಂದ ಮೇಲೆ
ಬರೀ ಪಡೆದವನ
ಋಣದ ಬಾಪ್ತು ತೀರುವುದೆಂತು....?
ಪ್ರೀತಿ ಗುಲಾಮಗಿರಿ ಅಲ್ಲ ಎಂದ ಮೇಲೆ
ಶರಣಾಗುವುದಕ್ಕೆ ಬೇರೆ ಅರ್ಥ ವೇನು
ಪ್ರೀತಿ ಯಲ್ಲಿ ಸೋಲುವುದು ಎಂದರೆ
ಗೆಲ್ಲುವುದಕ್ಕೂ ಬೇರೆ ಅರ್ಥ ವಿದೆಯೇ....?
ಈ ಗೌಜುಗಳು ಸಂತೆ ನನಗೆ ಬೇಡ
ಪ್ರೀತಿ ಅರ್ಥವಾ ಕೆಣಕಿ
ವೇದಾಂತಿ ಯಾಗುವಾ
ಬಯಕೆಯೂ ನನಗಿಲ್ಲ....
ನಲ್ಮೆಯ ಕಣ್ಗಳೋಂದಿಗೆ
ಬದುಕ ಯಾತ್ರೆಯಾ ಮುಗಿಸ ಬಂದಿರುವೆ
ವಾತ್ಸಲ್ಯವೋ ಮಮಕಾರವೋ ಕಡೆಗೆ ಪ್ರೀತಿಯೋ
ನನಗೆ ಅದರ ಅರ್ಥ ಗೊತ್ತಿಲ್ಲ
ನನ್ನದೆಂದು ಸಾಗುತ್ತಿರುವೆ
ಈ....... ದಾರಿ ಕಡೆಗೆ
ಸಾರ್ಥಕತೆಯ ಭಾವ ಉಳಿದರೆ
ಅಷ್ಟೆ ಸಾಕು ಜನುಮದ್ದುದಕ್ಕೂ....
.........ರಮ್ಯ.ಜೆ
ಪ್ರೀತಿ ಒಂದು ಅಪೂರ್ಣತೆಯ ಭಾವವಾ....?
ನನಗೇ ಬೇಕು ಎನ್ನುವ ಮನಸಿದ್ದ ಮೇಲೆ
ಸ್ವಾರ್ಥಕ್ಕೂ ಪ್ರೀತಿಗೂ ಬೇದವೆಲ್ಲಿದೆ.....?
ಕೊಟ್ಟು ಪಡೆಯಲು ಪ್ರೀತಿ
ವ್ಯಾಪಾರವಲ್ಲ ಅಂದ ಮೇಲೆ
ಬರೀ ಪಡೆದವನ
ಋಣದ ಬಾಪ್ತು ತೀರುವುದೆಂತು....?
ಪ್ರೀತಿ ಗುಲಾಮಗಿರಿ ಅಲ್ಲ ಎಂದ ಮೇಲೆ
ಶರಣಾಗುವುದಕ್ಕೆ ಬೇರೆ ಅರ್ಥ ವೇನು
ಪ್ರೀತಿ ಯಲ್ಲಿ ಸೋಲುವುದು ಎಂದರೆ
ಗೆಲ್ಲುವುದಕ್ಕೂ ಬೇರೆ ಅರ್ಥ ವಿದೆಯೇ....?
ಈ ಗೌಜುಗಳು ಸಂತೆ ನನಗೆ ಬೇಡ
ಪ್ರೀತಿ ಅರ್ಥವಾ ಕೆಣಕಿ
ವೇದಾಂತಿ ಯಾಗುವಾ
ಬಯಕೆಯೂ ನನಗಿಲ್ಲ....
ನಲ್ಮೆಯ ಕಣ್ಗಳೋಂದಿಗೆ
ಬದುಕ ಯಾತ್ರೆಯಾ ಮುಗಿಸ ಬಂದಿರುವೆ
ವಾತ್ಸಲ್ಯವೋ ಮಮಕಾರವೋ ಕಡೆಗೆ ಪ್ರೀತಿಯೋ
ನನಗೆ ಅದರ ಅರ್ಥ ಗೊತ್ತಿಲ್ಲ
ನನ್ನದೆಂದು ಸಾಗುತ್ತಿರುವೆ
ಈ....... ದಾರಿ ಕಡೆಗೆ
ಸಾರ್ಥಕತೆಯ ಭಾವ ಉಳಿದರೆ
ಅಷ್ಟೆ ಸಾಕು ಜನುಮದ್ದುದಕ್ಕೂ....
.........ರಮ್ಯ.ಜೆ
ನಾನು ಯಾರು.....?
ನಾನು ಯಾರು.....?
ಹುಟ್ಟುತ್ತಲೆ ಅಸಹನೆಯ
ಮಾತನ್ನುಮೌನವಾಗಿ
ಅರಗಿಸಿ ಕೋಂಡವಳು
ಶತಮಾನಗಳಿಂದಾಚೆ
ಚರಿತ್ರೆ ಪುಟಗಳಲ್ಲಿ ಮೆರೆದವಳು
ಮತ್ತೆ ನಿನ್ನ ಸ್ವಾರ್ಥಕ್ಕೆ
ಮುಖ ಮುಚ್ಚಿ ಅತ್ತವಳು
ನೂರಾರು ಕನಸ್ಸನ್ನು
ಕಣ್ಣಲ್ಲೆ ಮುಚಿಟ್ಟು
ಕಣ್ಮುಚ್ಚಿ ನನ್ನ
ದಾಳಕ್ಕೆ ಕುಣಿದವಳು
ನಿನ್ನ ನೂರಾರು ಚಾಟಿಯೇಟಿಗೆ
ಬೆನ್ನೊಡ್ಡಿ ನನ್ನ ಅಸ್ತಿತ್ವ ಕಾದು ಕೋಂಡವಳು
ಮತ್ತೆ ನಿನ್ನೆದುರು ತಲೆ ಎತ್ತಿ ನಿಂತವಳು
ಸಮಾನತೆಯ ಅಸ್ತ್ರಬಳಸಿ ನಿನ್ನೆದುರು ಸೆಟೆದು ನಿಂತವಳು
ಅಲ್ಲಿ ಗಂಡನ ಕೈಗೆ ಸಿಕ್ಕಿ ಅರಚಿದವಳು
ಇಲ್ಲಿ ಯಾರದ್ದೋ ತ್ರಿಷೆಗೆ ಮೈಯೋಡ್ಡಿ
ಯಮ ಯಾತನೆಗೆ ಬಲಿಯಾದವಳು
ಮತ್ತೆಲ್ಲೋ ಶಕ್ತಿ ಕುಂದಿದಾಗ ಆಸರೆಗೆ ಅಂಗಲಾಚಿದವಳು
ಹೌದು ನಾನೆ....!
ತಾಯಾಗಿ ಹಾಲುಣಿಸಿದವಳು
ಮಗಳಾಗಿ ಮಮತೆ ಇತ್ತವಳು
ಮಡದಿಯಾಗಿ ಒಲವ ಹಂಚಿದವಳು
ನಾನೀಗ ಕೇಳಬೇಕೆದೆ ನಿನಗೆ, ನಾನು
ನಿನ್ನ ಪಾಲಿಗೆ ಯಾರ......????
ರಮ್ಯ.ಜೆ
ಹುಟ್ಟುತ್ತಲೆ ಅಸಹನೆಯ
ಮಾತನ್ನುಮೌನವಾಗಿ
ಅರಗಿಸಿ ಕೋಂಡವಳು
ಶತಮಾನಗಳಿಂದಾಚೆ
ಚರಿತ್ರೆ ಪುಟಗಳಲ್ಲಿ ಮೆರೆದವಳು
ಮತ್ತೆ ನಿನ್ನ ಸ್ವಾರ್ಥಕ್ಕೆ
ಮುಖ ಮುಚ್ಚಿ ಅತ್ತವಳು
ನೂರಾರು ಕನಸ್ಸನ್ನು
ಕಣ್ಣಲ್ಲೆ ಮುಚಿಟ್ಟು
ಕಣ್ಮುಚ್ಚಿ ನನ್ನ
ದಾಳಕ್ಕೆ ಕುಣಿದವಳು
ನಿನ್ನ ನೂರಾರು ಚಾಟಿಯೇಟಿಗೆ
ಬೆನ್ನೊಡ್ಡಿ ನನ್ನ ಅಸ್ತಿತ್ವ ಕಾದು ಕೋಂಡವಳು
ಮತ್ತೆ ನಿನ್ನೆದುರು ತಲೆ ಎತ್ತಿ ನಿಂತವಳು
ಸಮಾನತೆಯ ಅಸ್ತ್ರಬಳಸಿ ನಿನ್ನೆದುರು ಸೆಟೆದು ನಿಂತವಳು
ಅಲ್ಲಿ ಗಂಡನ ಕೈಗೆ ಸಿಕ್ಕಿ ಅರಚಿದವಳು
ಇಲ್ಲಿ ಯಾರದ್ದೋ ತ್ರಿಷೆಗೆ ಮೈಯೋಡ್ಡಿ
ಯಮ ಯಾತನೆಗೆ ಬಲಿಯಾದವಳು
ಮತ್ತೆಲ್ಲೋ ಶಕ್ತಿ ಕುಂದಿದಾಗ ಆಸರೆಗೆ ಅಂಗಲಾಚಿದವಳು
ಹೌದು ನಾನೆ....!
ತಾಯಾಗಿ ಹಾಲುಣಿಸಿದವಳು
ಮಗಳಾಗಿ ಮಮತೆ ಇತ್ತವಳು
ಮಡದಿಯಾಗಿ ಒಲವ ಹಂಚಿದವಳು
ನಾನೀಗ ಕೇಳಬೇಕೆದೆ ನಿನಗೆ, ನಾನು
ನಿನ್ನ ಪಾಲಿಗೆ ಯಾರ......????
ರಮ್ಯ.ಜೆ
ಸೋಮವಾರ, ಸೆಪ್ಟೆಂಬರ್ 30, 2013
ಅಜ್ಜಿ ಮನೆ ಈಗ ನೆನಪಷ್ಟೇ......
ತೀರ್ಥಹಳ್ಳಿಯ ಬಳಿ ಹಳ್ಳಿಯ ಮನೆ ನಮ್ಮಜ್ಜಿ ಮನೆ ನನ್ನ ಪಾಲಿಗೆ ಅದು ಬರಿ ಮನೆ ಅಲ್ಲ ನನ್ನ ಬಾಲ್ಯದ ಸಾವಿರ ನೆನಪುಗಳ ಕಣ್ಮಂದೆ ತರಿಸುವ ಸ್ವರ್ಗ. ಅಕ್ಕ ನೋಂದಿಗೆ ಆಡುತ್ತಿದದ್ದು, ಪಪ್ಪ ತಂದುಕೊಟ್ಟಿದ್ದ ಪ್ಲಾಸ್ಟಿಕ್ ಜೋಕಾಲಿ ಮರಕ್ಕೆ ಕಟ್ಟಿ ದಿನ ಪೂರ ತೂಗುತ್ತಿದ್ದದ್ದು, ತಂಗಿ ತಮ್ಮ ನೋಂದಿಗೆ ಊರುಸುತ್ತಿದ್ದು, ಊರಾಚೆ ಮನೆಯಲ್ಲಿ ಮಾವು ಕದ್ದು ತಿಂದದ್ದು ಎಲ್ಲ ಆಗಾಗ ನನ್ನ ಕಾಡುವ ಮನಕೆ ತಂಪು ತರಿಸುವ ನೆನಪುಗಳು.....
ಕೆಲವು ದಿನ ಕಳೆದ ನಂತರ ಅಜ್ಜಿ ಮನೆಗೆ ಹೋದಾಗ ಹಳೆಯ ಮನೆಯನ್ನು ನವೀಕರಿಸಿದ್ದರು, ಎಲ್ಲ ಹೊಸತು ನೋಡಲು ಮುದ ಯೆನಿಸಿದ್ದರೂ, ಮನಸು ಹಳೆಯ ಮನೆಯ ನೆನಪುಗಳಿಂದಾಚೆ ಸಾಗಲು ಬಯಸಿರಲಿಲ್ಲ, ನಾವು ನೆಗೆದಾಡುತ್ತಿದ್ದ ಮಾವ ಮಲಗುತ್ತಿದ್ದ ಸಿಮೆಂಟ್ ನ ಕಟ್ಟೆ ಯ ಜಾಗದಲ್ಲಿ ಕಾಟ್ ಬಂದಿತ್ತು, ದೀಪಾವಳಿಯಲ್ಲಿ ಪಟಾಕಿ ಸದ್ದಿಗೆ ನಾವು ಹೆದರಿ ಅಡಗುತ್ತಿದ್ದ ಅಡುಗೆ ಮನೆ ಈಗ ಮೊದಲಿನಷ್ಟು ವಿಶಾಲವಾಗಿಲ್ಲ ಎಲ್ಲ ಬದಲಾಗಿತ್ತು ಮನಸ್ಸು ಒಪ್ಪದಿದ್ದಷ್ಟು.
ಕೆಲವೇ ವರ್ಷ ದಲ್ಲಿ ಮಾವ ಮಾಮಿ ತೀರಿಕೋಂಡ ಬಳಿಕ ಮತ್ತೆ ಯಾರಿಗು ಆ ಮನೆಯಲ್ಲಿ ಇರುವ ಪರಿಸ್ಥಿತಿಯಾಗಲಿ ಮನಸಾಗಲಿ ಇರಲಿಲ್ಲ, ಸಂಭಂದಿಕರೊಬ್ಬರ ಮದುವೆಗೆ ಹೋದಾಗ ಮಾಸಿದ ರಸ್ತೆ ಪಾಳುಬಿದ್ದ ಮನೆಯ ನೋಡಿ ಕಣ್ತುಂಬಿ ಬಂದಿತ್ತು ನಮ್ಮಜ್ಜಿ ಮನೆ ಪಾಳುಬಿದ್ದಿತ್ತು.........! ಮತ್ತೆ ಕೆಲವೇ ದಿನಗಳಲ್ಲಿ ಬೇರೆ ಯಾರಿಗೋ ಅದನ್ನು ಮಾರಲಾಯ್ತು
ನನ್ನ ಭಾವನೆಗಳ ಬಯಲ ಹೂದೋಟ ಬಾಲ್ಯದ ನೆನಪುಗಳ ಸ್ವಗ ಈಗ ನೋಡಲೂ ಸಿಗದಷ್ಟು ದೂರ......
ನನ್ನ ಭಾವನೆಗಳ ಬಯಲ ಹೂದೋಟ ಬಾಲ್ಯದ ನೆನಪುಗಳ ಸ್ವಗ ಈಗ ನೋಡಲೂ ಸಿಗದಷ್ಟು ದೂರ......
ಹೌದು ಮನುಷ್ಯ ಬೆಳೆಯುತ್ತಾನೆ ಅವಷ್ಯಕತೆ ಮನಸ್ಸು ಎಲ್ಲವೂ ಬದಲಾಗತ್ತೆ ಆದರೆ ನಮ್ಮ ಸುತ್ತ ಮೌನವಾಗಿ ತಾಯಿ ಯಂತೆ ಪೊರೆದ ಪರಿಸರ ನವು ಗೆದ್ದೆನೆಂದು ಬೀಗುವ ನಮ್ಮ ನೋಡಿ ಮೆಲ್ಲಗೆ ನಾವು ಕಳೆದು ಕೋಂಡ ಕ್ಷಣಗಳ ಲೆಕ್ಕ ಕೊಡತ್ತದೆ.......
ರಮ್ಯ.ಜೆ........
ರಮ್ಯ.ಜೆ........
ಶುಕ್ರವಾರ, ಸೆಪ್ಟೆಂಬರ್ 27, 2013
ಶುಕ್ರವಾರ, ಆಗಸ್ಟ್ 2, 2013
ಮತ್ತೇಕೆ ನನ್ನತ್ತ ನೋಡುವೆ....... !
ಮತ್ತೇಕೆ ನನ್ನತ್ತ ನೋಡುವೆ
ಇನ್ನೇನೂ ಉಳಿದಿಲ್ಲ
ನೋವಲ್ಲಿ ಸದಾ ಕುಗ್ಗುತ್ತಿರುವ
ಹಾಳಾದ ಮನವ ಬಿಟ್ಟು
ನಿನ್ನೆದೆಯಲ್ಲಿ ನನ್ನ ನಾ
ಹುಡುಕಲು ಹೋಗಿ
ಸೋತು ಸೋತು
ಪರಿತಪಿಸಿದ ನೆನಪುಗಳಾ ಬಿಟ್ಟು
ಪ್ರತಿ ಬಾವನೆಗಳಿಗೆ ನೀ
ಎರಚಿದ ಮಸಿಯ ಕಲೆಗಳಲ್ಲಿ
ಮಂಕಾಗಿ ಗುಟುಕ ಒಲವಿಗಾಗಿ
ಕಾತರಿಸಿತ್ತಿರುವ ಕಂಗಳಾ ಬಿಟ್ಟು
ಬಿಟ್ಟು ಸಾಗುವೆನೆಂಬ ನಿನ್ನ
ಮಾತುಗಳ ಚಾಟಿಯೇಟಿಗೆ
ಚೇತರಿಕೆ ಕಾಣದಿರುವ
ನನ್ನ ಒಡೆದ ಹೃದಯವಾ ಬಿಟ್ಟು.....
ರಮ್ಯ. ಜೆ
ಇನ್ನೇನೂ ಉಳಿದಿಲ್ಲ
ನೋವಲ್ಲಿ ಸದಾ ಕುಗ್ಗುತ್ತಿರುವ
ಹಾಳಾದ ಮನವ ಬಿಟ್ಟು
ನಿನ್ನೆದೆಯಲ್ಲಿ ನನ್ನ ನಾ
ಹುಡುಕಲು ಹೋಗಿ
ಸೋತು ಸೋತು
ಪರಿತಪಿಸಿದ ನೆನಪುಗಳಾ ಬಿಟ್ಟು
ಪ್ರತಿ ಬಾವನೆಗಳಿಗೆ ನೀ
ಎರಚಿದ ಮಸಿಯ ಕಲೆಗಳಲ್ಲಿ
ಮಂಕಾಗಿ ಗುಟುಕ ಒಲವಿಗಾಗಿ
ಕಾತರಿಸಿತ್ತಿರುವ ಕಂಗಳಾ ಬಿಟ್ಟು
ಬಿಟ್ಟು ಸಾಗುವೆನೆಂಬ ನಿನ್ನ
ಮಾತುಗಳ ಚಾಟಿಯೇಟಿಗೆ
ಚೇತರಿಕೆ ಕಾಣದಿರುವ
ನನ್ನ ಒಡೆದ ಹೃದಯವಾ ಬಿಟ್ಟು.....
ರಮ್ಯ. ಜೆ
ಭಾನುವಾರ, ಜುಲೈ 7, 2013
ಓ ಚೈತನ್ಯ ಧಾರೆಯೇ ......!
ಅಂದು ನೀ ಹಂಚಿದ ಪ್ರೀತಿಯ ಅಮೃತ
ಇಂದು ತಾಕಿದೆ ನನ್ನ ಹೃದಯಕೆ
ಬಂದು ಎತ್ತಲಿಂದಲೋ
ಎಲ್ಲ ಕುಶಲಗಳ ಒತ್ತೆ ಇಡು
ನಿಲ್ಲದಿರು ಗುರಿ ಮುಟ್ಟುವತನಕ
ಅರಿಮೊದಲು ನಿನ್ನ ನೀ
ಇಣಿಸದಿರು ಪರರ ಕೆಡುಕಾ
ತೊಡೆದು ಹಾಕು ಅಜ್ಞಾನವ
ಮುತ್ತಿಸು ಜ್ಞಾನದ ಜೋತಿಯ
ಎಲ್ಲ ನೀನೆ, ಎಲ್ಲ ನೀನೆ
ನಿನ್ನ ಬದುಕಾ ರೂಪಿಸೋ
ಶಕ್ತಿ ನೀನೆ ಎಂದೇ ನೀ.....
ಅರಿವಾಗುತ್ತಿದೆ ಇಂದು ನಿನ್ನ ನಿಲುವು
ಅರಳಿಸುತ್ತಿದೆ ಮಾನವ ಬುಗ್ಗೆ ಯಂತೆ
ಎದೆಯ ಮಿಡಿತವೆ ತಟ್ಟುತಿದೆ
ಚಡಪದಿಸದಂತೆ ಮನ ತಾಳಲಾರದೆ
ಬತ್ತಿ ಹೋದ ಬೆಂಗಾಡಿನಲ್ಲಿ
ಮೂಡಿಬಂಡ ಹಸಿರು ನಿನ್ನೀ ಆದರ್ಶ
ದಿಕ್ಕೆಟ್ಟು ಓಡುತಿಹ ಬದುಕಿನಾ ಅಶ್ವಕ್ಕೆ
ದಿಕ್ಸೂಚಿ ನಿನ್ನೀ ವಿಶಾಲ ನೋಟ
ಅರಳುಬಾ ನನ್ನೀ ಮನದ ಕೆಸರಿನಲ್ಲಿ
ತುಂಬುವಾ ಹೃದಯಕ್ಕೆ ಆಶಯದ ಹೊಂಗಿರಣ
ನಂಬು ನನ್ನ ನಿನ್ನೀ ದೀರ ಕಂದನು ನಾನು
ತುಂಬು ಬಾ ಚೈತನ್ಯ ನನ್ನೀ ಮನದಲ್ಲಿ.......
ರಮ್ಯ. ಜೆ
ಭಾನುವಾರ, ಜೂನ್ 16, 2013
ಬದುಕೇ ಹೀಗೆ........... !
ಎಂದೋ ಕಳೆದುಕೊಂಡ ನನಪಿಗೆ
ಮರುಗುವ ಬಾರದ ಕಾಲಗಳ ಕಾಯುವ
ಬದುಕೇ ಹೀಗೆ...........
ಹರಿವ ನದಿಯಂತೆ ನಿಷ್ಕಲ್ಮಶ
ವಗಬೇಕೆಂಬ ಆಸೆ ಯಾರಿಗಿಲ್ಲ
ಬಿಡದು ಬದುಕಿನ ಮಾಯೆ
ಕಾಡುವ ಒಲವಿನ ಛಾಯೆ
ಇದು ರಂಗಿನಾಟ ಮದರಂಗಿ
ಯಂತೆ ಬಣ್ಣದ ಕಲೆಯ ಉಳಿಸಿ ಸಾಗುವುದು
ಇದು ರಾಗಗಳ ಕೂಟ ಸಂಗೀತದಂತೆ
ಶೃತಿ ತಪ್ಪಿದರೆ ಸಹ್ಯವಾಗದು
ಸಾಗಬೇಕಿದೆ ನಾವು
ಕಲ್ಲಿನದ್ದೋ ಮುಳ್ಳಿನದ್ದೋ
ಹಾಡಿಹಿಡಿದು ಊರುಬರುವಾವರೆಗೂ
ಯಾತ್ರೆ ಮುಗಿವಾವರೆಗೂ......
ರಮ್ಯ. ಜೆ
ನೋಡೀಗ...... !
ನೋಡೀಗ ನಿಂತಿರುವೆ
ಹಾದಿಮರೆತ ಕರುವಿನಂತೆ
ಊರಸೇರಲು ಕಾತರಿಸಿ
ಕಂಗೆಟ್ಟಿ ನಿನ್ನ ನೋಡುವಂತೆ
ಶೃತಿಇರದ ಸ್ವರದಂತೆ
ನಾನೀಗ ಹೊರಡ ಬಹುದೇ
ನನ್ನೊಳಗೆ ಮಧುರ ರಾಗ
ನಿನ್ನ ಉಸಿರಿಂದ ...............
ಕಾದು ಕಾತರಿಸಿ ಕುಂದುತಿಹೇನು ನಾ
ಬಾ ಇಂದೇ ನೀನು ಜೆವದೊಡಲಾಗಿ
ಬಾ ಇಂದೇ ನನ್ನ ಮನದ ಹಸಿರಾಗಿ
ಬರುವುದಾದರೆ ಇಂದೇ ಬಾ
ಬಾಳುವೆ ಮತ್ತೆ ಹಸಿಯ ನೆನಪುಗಳಿಗೆ
ಉಸಿರ ನೀಡುತ್ತ ಕನವರಿಸುವ
ಕಂಗಳಿಗೆ ತಂಪು ನೀಡುತ್ತ
ಇಲ್ಲವಾದರೆ ಸಂತಸಪಡು
ನನ್ನ ಈ ನೋವಿಗೆ ಕಾರಣ ನೀನೆಂದು
ಮೂಕಮನಸಿನ ನೂರು ಕನಸಿಗೆ
ಕೊಳ್ಳಿ ಇಟ್ಟ ಗೆಲುವು ನಿನ್ನದೆಂದು .......
ರಮ್ಯ.ಜೆ
ಭಾನುವಾರ, ಏಪ್ರಿಲ್ 21, 2013
ಕೈಚಾಚಿ ಒಮ್ಮೆ ....!
ಮೋಡತಾ ಕವಿದರು ಸೂರ್ಯನನು
ಬೆಳಕ ನುಂಗಲು ಸಾಧ್ಯವೇ?
ಇರುಳ ಚಂದ್ರನು ಮಾಸಿದರು
ಪೌರ್ಣಮೆಯ ಚೆಲುವಿಗೆ ಕೊನೆಇದೆಯೆ........?
ಬದುಕ ಪಯಣದಲ್ಲಿ ಎಲ್ಲಹೀಗೆ
ಒಮ್ಮೆ ಸೋಲು ಒಮ್ಮೆ ಗೆಲುವು
ನಿಂತರೆ ಬೆಲೆಇಲ್ಲ
ತಿರುಗದೆ ಎಲ್ಲೇ ಇಲ್ಲ.........!
ನಶ್ವರದ ನಗು ಚೆಲ್ಲಿ ಎಲ್ಲನೋವಿಗೆ
ಮರೆಯದಿರು ಬುತ್ತಿ ನಿನ್ನ ಪಾಲಿನದೆ
ಎಲ್ಲ ಸೋಲಿಗೂ ಉತ್ತರವು ಮುಂದಿದೆ
ಆಗಸವು ನಿಮ್ಮದೇ ಕೈಚಾಚಿ ಒಮ್ಮೆ ....!
ಇಟ್ಟ ಕಣ್ಣೀರು ಮುತ್ತಾಗಿಬರುವ
ಕಾಲವು ಮುಂದಿದೆ
ನಾಳೆಗಳ ನೆರಳಾಟ
ಬೆಳಕನ್ನೇ ತರಲಿದೆ ಬಿಂಕವೇಕೆ .....?
ಮಂಗಳವಾರ, ಏಪ್ರಿಲ್ 16, 2013
ನನ್ನಮ್ಮ ........!
ನನ್ನೊಡಲ ನೂರು ಕನಸಿಗೆ
ಜೀವವಾದವಳೇ ....
ಕಂಗಳಿನ ಭಾಷೆ ಮಾತಾಡುವಂತೆ
ಮಾಡಿದವಳೇ .....
ಜೊತೆಗಿದ್ದು ಗುರುವಂತೆ ತಿದ್ದಿ
ನಡೆಸಿದವಳೇ....
ಹರಸುತ್ತ ಕ್ಷಮಿಸುತ್ತ ಬಾಲ್ಯ
ಹಂಚಿಕೊಂದವಳೇ .....
ಏನೆಂದು ಕರೆಯಲಿ ನಿನ್ನ
ಗುರುವೋ, ಸ್ನೇಹಿತೆಯೂ
ನನ್ನೊಡತಿಯೋ ....
ಬೊಗಸೆಯತುಂಬಾ ಒಲವ
ತುತ್ತು ತಿನ್ನಿಸಿದವಳೇ....
ನನ್ನತ್ತ ಮುಗ್ದ ನಗು ಚೆಲ್ಲಿ
ಮಡಿಲ ಜೋಗುಳದಲ್ಲಿ ನನ್ನ ಮೆರೆಸಿದವಳೇ ....
ಏನೆಂದು ಕರೆಯಲೇ ನಿನ್ನ
ನನ್ನಮ್ಮ ಪದಗಳಿಗೆ ಸಿಗದ
ಅಮೃತ ಶಿಲೆ ನೀನು....
ಬಡಿಸಿದಷ್ಟು ತೀರದ
ಅಕ್ಷಯನಿಧಿ ನೀನು.....
ರಮ್ಯ. ಜೆ
ಸೋಮವಾರ, ಏಪ್ರಿಲ್ 15, 2013
ಹಳಿಯ ಹಕ್ಕಿಗಳಾಗುವ
ಮುಕವಗಿದೆ ಭಾವ
ಮನದ ಹಮ್ಮು ಬಿಮ್ಮುಗಳ ನೆನೆದು
ಎಲ್ಲ ತುಮುಲಗಳ ಮೂಟೆ ಕಟ್ಟಿ
ಯೇಸೆಯುವಾಸೆ ಆ ಕಾರ್ಮೋಡದಾಚೆ
ಕಳೆದು ಹೋಗಿದೆ ನೋಡು ನನ್ನದೆಲ್ಲ
ಉಳಿದ ನಲ್ಮೆಯ ಭಾವ ನಿನ್ನದೇ ಎಲ್ಲ
ಹೊರಬಂದೆ ನಾನು ಕವಿದ ಕತ್ತಲಿಂದ
ಹಾರಿಬಿಡುವ ನಾವು ನೆಲಗಗನದ ತುಂಬಾ
ಅಲ್ಲಿ ನಾನಿಲ್ಲ, ನೀನಿಲ್ಲ........!
ಹೋಲಿಸಿಕೊಂಡು ನೀಳನಾಲಗೆಯ
ತುಂಬಿಸುವ ಬಾರಾ ವದನದಲಿ ನಗುವ
ಹಳಿಯ ಹಕ್ಕಿಗಳಾಗುವ ಮತ್ತೆ ಕೂಡಿ ಹಾರುವ.
ರಮ್ಯ.ಜೆ
ಮನದ ಹಮ್ಮು ಬಿಮ್ಮುಗಳ ನೆನೆದು
ಎಲ್ಲ ತುಮುಲಗಳ ಮೂಟೆ ಕಟ್ಟಿ
ಯೇಸೆಯುವಾಸೆ ಆ ಕಾರ್ಮೋಡದಾಚೆ
ಕಳೆದು ಹೋಗಿದೆ ನೋಡು ನನ್ನದೆಲ್ಲ
ಉಳಿದ ನಲ್ಮೆಯ ಭಾವ ನಿನ್ನದೇ ಎಲ್ಲ
ಹೊರಬಂದೆ ನಾನು ಕವಿದ ಕತ್ತಲಿಂದ
ಹಾರಿಬಿಡುವ ನಾವು ನೆಲಗಗನದ ತುಂಬಾ
ಅಲ್ಲಿ ನಾನಿಲ್ಲ, ನೀನಿಲ್ಲ........!
ಹೋಲಿಸಿಕೊಂಡು ನೀಳನಾಲಗೆಯ
ತುಂಬಿಸುವ ಬಾರಾ ವದನದಲಿ ನಗುವ
ಹಳಿಯ ಹಕ್ಕಿಗಳಾಗುವ ಮತ್ತೆ ಕೂಡಿ ಹಾರುವ.
ರಮ್ಯ.ಜೆ
ಭಾನುವಾರ, ಏಪ್ರಿಲ್ 14, 2013
ಮರೆಯಾಗಿ ಹೋಗಿಬೇಗ......... !
ನೆನಪುಗಳ ಕಾರ್ಮೋಡ ಸುತ್ತ ಕವಿದು
ಬೆಳಕನ್ನೆ ನುಂಗಿತು ಬಗ ಬಗನೆ ಎದ್ದು
ಹೊರಬರುವ ಆಸೆ ಮೂಡಿತ್ತು ಒಳಗೊಳಗೆ
ಆದರು ತಮವು ಕುಕ್ಕಿತ್ತು ಕಣ್ಣ
ನೆನಪುಗಳೇ ಹಾಡಾಗಿ ಹಾಡಬೇಡಿ
ಆ ಹಾಡು ನನಗೆ ಕರ್ಕಶವೆ ಅಲ್ಲ
ಆದರು ಕಣ್ಣ ಹನಿತುಂಬ ಭಾರ
ಹನಿಮೀರಿದ ಹಾಡಹಾಡುಬೇಗ
ನೆನೆಪುಗಳೇ ಮರೆಯಾಗಿ ಹೋಗಿಬೇಗ
ಕನಸಾಗಿ ಕಾಡುವುದಿದ್ಯವ ನ್ಯಾಯ
ಮರೆಯಲೆಂದೇ ಹೋಗು ಮರೆವೆ ನೀನಾಗು
ಕಾರ್ಮೋಡದಂತೆ ಕವಿಯದಿರು ಕಣ್ಗೆ .....
ರಮ್ಯ. ಜೆ
ಬುಧವಾರ, ಏಪ್ರಿಲ್ 10, 2013
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
















