ಗುರುವಾರ, ಅಕ್ಟೋಬರ್ 31, 2013

ನಾನು ಯಾರು.....?

ನಾನು ಯಾರು.....?
ಹುಟ್ಟುತ್ತಲೆ ಅಸಹನೆಯ 
ಮಾತನ್ನುಮೌನವಾಗಿ
ಅರಗಿಸಿ ಕೋಂಡವಳು

ಶತಮಾನಗಳಿಂದಾಚೆ
ಚರಿತ್ರೆ ಪುಟಗಳಲ್ಲಿ ಮೆರೆದವಳು
ಮತ್ತೆ ನಿನ್ನ ಸ್ವಾರ್ಥಕ್ಕೆ
ಮುಖ ಮುಚ್ಚಿ ಅತ್ತವಳು

ನೂರಾರು ಕನಸ್ಸನ್ನು
ಕಣ್ಣಲ್ಲೆ ಮುಚಿಟ್ಟು
ಕಣ್ಮುಚ್ಚಿ ನನ್ನ
ದಾಳಕ್ಕೆ ಕುಣಿದವಳು

ನಿನ್ನ ನೂರಾರು ಚಾಟಿಯೇಟಿಗೆ
ಬೆನ್ನೊಡ್ಡಿ ನನ್ನ ಅಸ್ತಿತ್ವ ಕಾದು ಕೋಂಡವಳು
ಮತ್ತೆ ನಿನ್ನೆದುರು ತಲೆ ಎತ್ತಿ ನಿಂತವಳು
ಸಮಾನತೆಯ ಅಸ್ತ್ರಬಳಸಿ ನಿನ್ನೆದುರು ಸೆಟೆದು ನಿಂತವಳು

ಅಲ್ಲಿ ಗಂಡನ ಕೈಗೆ ಸಿಕ್ಕಿ ಅರಚಿದವಳು
ಇಲ್ಲಿ ಯಾರದ್ದೋ ತ್ರಿಷೆಗೆ ಮೈಯೋಡ್ಡಿ
ಯಮ ಯಾತನೆಗೆ ಬಲಿಯಾದವಳು
ಮತ್ತೆಲ್ಲೋ ಶಕ್ತಿ ಕುಂದಿದಾಗ ಆಸರೆಗೆ ಅಂಗಲಾಚಿದವಳು

ಹೌದು ನಾನೆ....!
ತಾಯಾಗಿ ಹಾಲುಣಿಸಿದವಳು
ಮಗಳಾಗಿ ಮಮತೆ ಇತ್ತವಳು
ಮಡದಿಯಾಗಿ ಒಲವ ಹಂಚಿದವಳು
ನಾನೀಗ ಕೇಳಬೇಕೆದೆ ನಿನಗೆ, ನಾನು
ನಿನ್ನ ಪಾಲಿಗೆ ಯಾರ......????

                   

                                       ರಮ್ಯ.ಜೆ